ಹೂವರಸಿ
	     ಮಾಲ್ವೇಸೀ ಕುಟುಂಬದ ಥೆಸ್ಪಿಸಿಯ ಪಾಪ್ಯುಲ್ನಿಯ ಪ್ರಭೇದದ ಮರ. ಬುಗುರಿಮರ ಪರ್ಯಾಯನಾಮ. ಕರಾವಳಿ ಪ್ರದೇಶದ ಈ ನಿತ್ಯಹರಿದ್ವರ್ಣದ ಸಣ್ಣ ಮರವನ್ನು ಒಳನಾಡಿನಲ್ಲಿ ವಿಶೇಷವಾಗಿ ಸಾಲುಮರಕ್ಕೆಂದು ನೆಟ್ಟು ಬೆಳೆಸುತ್ತಾರೆ. ದೊಡ್ಡ ಹೃದಯಾಕಾರದ ಎಲೆಗಳು, ಮಧ್ಯದಲ್ಲಿ ನಡುಗೆಂಪಿನಿಂದ ಕೂಡಿದ ಹಳದಿಯ ಹೂಗಳೂ ಬುಗುರಿಯಾಕಾರದ ಕಾಯಿಗಳೂ ಈ ಮರದ ವೈಶಿಷ್ಟ್ಯ. ಸಛಿದ್ರ (ಪೊರೊಸ್) ಮಣ್ಣಿನಲ್ಲಿ ಹುಲುಸಾಗಿ ಬೆಳೆಯುವುದು. ಇದನ್ನು ಬೀಜ ಬಿತ್ತಿಯಾಗಲೀ ನೆಡು ಕಡ್ಡಿಯಿಂದಾಗಲೀ ಬೆಳೆಸಬಹುದು. 					
		(ಎ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ